Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೇ ಹತ್ತರಂದು ಮರು ಬಿಡುಗಡೆಯಾಗಲಿದೆ ಪುನೀತ್ ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ``ಅಂಜನಿ ಪುತ್ರ``
Posted date: 30 Tue, Apr 2024 08:52:11 AM
ಎಂ.ಎನ್.ಕೆ‌ ಮೂವೀಸ್ ಲಾಂಛನದಲ್ಲಿ ಎಂ.ಎನ್ ಕುಮಾರ್ ನಿರ್ಮಿಸಿ, ಎ.ಹರ್ಷ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ ಅವರು ನಾಯಕರಾಗಿ ನಟಿಸಿದ್ದ ಸೂಪರ್ ಹಿಟ್  ಚಿತ್ರ " ಅಂಜನಿಪುತ್ರ" ಮೇ 10 ರಂದು ಮರು ಬಿಡುಗಡೆಯಾಗುತ್ತಿದೆ. ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ಮರು ಬಿಡುಗಡೆ(ರೀ ರಿಲೀಸ್) ಮಾಡುತ್ತಿರುವುದಾಗಿ ನಿರ್ಮಾಪಕ‌ ಎಂ ಎನ್ ಕುಮಾರ್ ತಿಳಿಸಿದ್ದಾರೆ. 
 
ಈ ಚಿತ್ರದಲ್ಲಿ ಪುನೀತ್ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ರವಿ ಬಸ್ರೂರ್ ಅವರ‌ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದ "ಬಾರಿ ಖುಷಿ ಮಾರೆ ನಂಗೆ" ಸೇರಿದಂತೆ ಎಲ್ಲಾ ಹಾಡುಗಳು‌ ಜನಪ್ರಿಯವಾಗಿದೆ. ಬೇಸಿಗೆ ರಜೆಯ ಈ ಸಮಯದಲ್ಲಿ ಸೂಪರ್ ಹಿಟ್ "ಅಂಜನಿ ಪುತ್ರ" ಚಿತ್ರವನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡಲು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೇ ಹತ್ತರಂದು ಮರು ಬಿಡುಗಡೆಯಾಗಲಿದೆ ಪುನೀತ್ ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ``ಅಂಜನಿ ಪುತ್ರ`` - Chitratara.com
Copyright 2009 chitratara.com Reproduction is forbidden unless authorized. All rights reserved.